• ಸ್ಥಳ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಲಕೇರಿ (ಹಾನಗಲ್ಲ ತಾಲೂಕು)

ಕಲಕೇರಿ ಶಾಲೆಯ ಚಿತ್ರಣ ಬದಲಿಸಿದ ಆದರ್ಶ ಶಿಕ್ಷಕ ಅಶೋಕ . ಈ. ಬುಡ್ಡನವರ್‌ಗೆ ಭಾವಪೂರ್ಣ ಗುರುವಂದನೆ “ಒಬ್ಬ ಶಿಕ್ಷಕ ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುವುದಕ್ಕೆ ಕಲಕೇರಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕಾರ್ಯನಿರ್ವಹಿಸಿ, ಇಡೀ ಶಾಲೆಯ ಚಿತ್ರಣವನ್ನೇ ಬದಲಾಯಿಸಿದ ಈ ಪ್ರಧಾನ ಗುರುಗಳೇ ಪ್ರತ್ಯಕ್ಷ ಸಾಕ್ಷಿ” ಎಂದು ಹಿರಿಯ ಶಿಕ್ಷಕ ಹಾಗೂ ಸಿ.ಆರ್.ಪಿ (CRP) ಶ್ರೀ ಎಸ್ ಎಸ್ ಹಿರೇಮಠ್ ಅವರು ಮುಕ್ತ ಕಂಠದಿಂದ ಶ್ಲಾಘಿಸಿದರು.

ಸಮೀಪದ ಕಲಕೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ವಯೋನಿವೃತ್ತಿ ಹೊಂದಿದ ಬಡ್ತಿ ಮುಖ್ಯ ಶಿಕ್ಷಕರಾದ ಶ್ರೀ ಅಶೋಕ ಈ. ಬುಡ್ಡನವರ್ ಇವರ ಗೌರವಾನ್ವಿತ ಗುರುವಂದನಾ ಹಾಗೂ ಅಭಿನಂದನಾ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ (SDMC) ಮತ್ತು ಸಮಸ್ತ ಕಲಕೇರಿ ಗ್ರಾಮಸ್ಥರ ಸಂಯುಕ್ತ ಆಶ್ರಯದಲ್ಲಿ ಈ ಅತ್ಯಂತ ಯಶಸ್ವಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಹಕಾರ ಸ್ಮರಿಸಿದ ನಿವೃತ್ತ ಪ್ರಧಾನ ಗುರುಗಳು:ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಮುಖ್ಯ ಶಿಕ್ಷಕರಾದ ಶ್ರೀ ಅಶೋಕ . ಈ. ಬುಡ್ಡನವರ್ ಅವರು, “ನನ್ನ ಸುದೀರ್ಘ ಸೇವಾವಧಿಯಲ್ಲಿ ಶಾಲೆಯ ಪ್ರಗತಿಗಾಗಿ ಶ್ರಮಿಸಲು ಸಾಧ್ಯವಾಗಿದ್ದು ಇಲ್ಲಿನ ಗ್ರಾಮಸ್ಥರು ಹಾಗೂ ಎಸ್‌ಡಿಎಂಸಿ (SDMC) ಪದಾಧಿಕಾರಿಗಳ ನಿರಂತರ ಸಹಕಾರದಿಂದ ಕಲಕೇರಿ ಶಾಲೆಯಲ್ಲಿ ಕಳೆದ ದಿನಗಳು ಮತ್ತು ಶೈಕ್ಷಣಿಕ ಅನುಭವಗಳು ನನ್ನ ವೃತ್ತಿ ಬದುಕಿನ ಅತ್ಯಂತ ಅಮೂಲ್ಯವಾದವುಗಳು” ಎಂದು ಭಾವುಕರಾಗಿ ನುಡಿದು, ಎಲ್ಲರ ಸಹಕಾರವನ್ನು ಕೃತಜ್ಞತೆಯಿಂದ ಸ್ಮರಿಸಿದರು. ಶಿಕ್ಷಕರ ಕಾರ್ಯವೈಖರಿಗೆ ಶ್ಲಾಘನೆ:ಕಾರ್ಯಕ್ರಮದಲ್ಲಿ ಅಭಿನಂದನಾ ನುಡಿಗಳನ್ನಾಡಿದ ಸಮೀಪದ IGRS ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ಮಂಜುನಾಥ ಪುರದ ಅವರು, ಬುಡ್ಡನವರ್ ಅವರ ಶಿಸ್ತು, ಕರ್ತವ್ಯ ನಿಷ್ಠೆ ಹಾಗೂ ಮಕ್ಕಳ ಮೇಲಿನ ಮಮಕಾರದ ಕಾರ್ಯವೈಖರಿಯನ್ನು ಕೊಂಡಾಡಿದರು. ಶಾಲೆಯ ಭೌತಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಇತರರಿಗೆ ಮಾದರಿಯಾಗಿದೆ ಎಂದರು. ಗಣ್ಯರ ಉಪಸ್ಥಿತಿ:ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷರಾದ ಶ್ರೀ ಮಾರ್ತoಡ ಚ. ಗೌಡರ ವಹಿಸಿದ್ದರು. ವೇದಿಕೆಯ ಮೇಲೆ ಪ್ರಮುಖ ಗಣ್ಯರಾದ ಶ್ರೀ ಯು. ಡಿ. ಸವಣೂರ ಶ್ರೀಮತಿ ಅನ್ನಪೂರ್ಣ ಡಿ., ಶ್ರೀ ಭೀಮಪ್ಪ ವಾಸನ , ಶ್ರೀ ಪ್ರಕಾಶ ಬಣಕಾರ್ , ಶ್ರೀ ಅಜ್ಜಪ್ಪ ಶಿರಳ್ಳಿ ವೀರೇಶ ಜೋಗೊಂಡ್ರ, ಕುಮಾರ್ ಮೆಳ್ಳಿಹಳ್ಳಿ, ಶುಭಾಸಪ್ಪ ಹಾಲಮ್ಮನವರ, ರವಿ ಬಾರ್ಕಿ, ಚಂದ್ರು ಗೌರಕ್ಕನವರ, ಪುಟ್ಟಪ್ಪ ಕಿರವಾಡಿ ಸೇರಿದಂತೆ ತಾಲೂಕಿನ ಶಿಕ್ಷಕ ಸಂಘಟನೆಯ ಪದಾಧಿಕಾರಿಗಳು, ಶಿಕ್ಷಕ ವೃಂದದವರು ಹಾಗೂ ಕಲಕೇರಿ ಗ್ರಾಮದ ನೂರಾರು ಸಾರ್ವಜನಿಕರು ಭಾಗವಹಿಸಿ ನಿವೃತ್ತ ದಂಪತಿಗಳನ್ನು ಅತ್ಯಂತ ಸಡಗರದಿಂದ ಸನ್ಮಾನಿಸಿ, ಮುಂದಿನ ವಿಶ್ರಾಂತ ಜೀವನಕ್ಕೆ ಶುಭ ಹಾರೈಸಿದರು. ವರದಿ ಸ್ಪರ್ಧಾ ನ್ಯೂಸ್ ಕಲಕೇರಿ.