
ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಹಾವೇರಿ ಇವರ ಸಹಯೋಗದೊಂದಿಗೆ, ಸಮೂಹ ಸಂಪನ್ಮೂಲ ಕೇಂದ್ರ ಕಬ್ಬೂರು ವತಿಯಿಂದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಸಂಗೂರ ಇವರ ಆಶ್ರಯದಲ್ಲಿ 2026–27 ನೇ ಸಾಲಿನ 14 ವರ್ಷದೊಳಗಿನ ಪ್ರಾಥಮಿಕ ಶಾಲಾ ಕ್ರೀಡಾಕೂಟವು ದಿನಾಂಕ 01 ಮತ್ತು 02 ಸೆಪ್ಟೆಂಬರ್ 2026 ರಂದು ಶ್ರೀ ಕುಮಾರೇಶ್ವರ ಪ್ರೌಢ ಶಾಲೆಯ ಆವರಣದಲ್ಲಿ ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ನೆರವೇರಿತು.

ಶ್ರೀ ಬಸವೇಶಗೌಡ ಪಾಟೀಲ್ ಉದ್ಘಾಟನೆಯನ್ನು ನೆರವೇರಿಸಿದರು ಮತ್ತು ಕ್ರೀಡಾ ಧ್ವಜಾರೋಹಣವನ್ನು ಶ್ರೀ ಮೊಹಮ್ಮದ್ ಹನೀಫ್ ರಾಟಿಮನಿ ಎಸ್ ಡಿ ಎಂ ಸಿ ಅಧ್ಯಕ್ಷರು ನೆರವೇರಿಸಿದರು. ಕ್ರೀಡಾಜ್ಯೋತಿ ಬೆಳಗಿಸುವ ಮೂಲಕ BRC ಸಮನ್ವಯಾಧಿಕಾರಿಗಳಾದ ಶ್ರೀ ಮಹದೇವಪ್ಪ ಡಿ.ಎಂ. ಅವರು ಕ್ರೀಡಾಕೂಟಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಿದರು.
ಗಣ್ಯರ ಉಪಸ್ಥಿತಿ:
ಕಾರ್ಯಕ್ರಮದಲ್ಲಿ ಹೊನ್ನಪ್ಪ ಮಾಳಗಿ. ಶ್ರೀ ವೀರನಗೌಡ ಪಾಟೀಲ್. ಸುರೇಶ್ ಮಾಳಗಿ. ಹನುಮಂತಪ್ಪ ಮಾಳಗಿ. ಶ್ರೀ ಎಸ್ ಆರ್ ಬಾರ್ಕಿ PDO ಸಂಗೂರ. ನಿಂಗಪ್ಪ ಸಜ್ಜನ. ಮಂಜು ಹೆಗ್ಗಣ್ಣನವರ್. ಶ್ರೀ ಸುರೇಶ ಸಜ್ಜನ, ಬೆನಕರಾಜ ಹರಕಾರಿ, ಶ್ರೀಮತಿ ಶಾರವ್ವ ಹೊಸೂರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಗ್ರಾಮ ಪಂಚಾಯತಿಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಅಧಿಕಾರಿಗಳು ಮತ್ತು ಶಿಕ್ಷಕರ ಸಹಭಾಗಿತ್ವ:
ಹಾವೇರಿ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗಳಾದ ಶ್ರೀ ಅಲ್ಫನ್ ಸರ್. ಸಂಗೂರ ಕನ್ನಡ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಸಿ.ಎಸ್. ಚಟ್ಲಿ, ಸಂಗೂರ ಸರ್ಕಾರಿ ಉರ್ದು ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಎನ್.ಕೆ. ಹೊಸೂರ, ಕಬ್ಬೂರು ಸಿ.ಆರ್.ಪಿ (CRP) ಗಳಾದ ಶ್ರೀ ಎನ್.ಎಚ್. ಕಣವಿ, ಶ್ರೀ ಇಸ್ಮಾಯಿಲ್ ತಡಕನಹಳ್ಳಿ, ಶ್ರೀಮತಿ ಶಶಿರೇಖಾ ಗಾಣಿಗೇರ.ಶಿಕ್ಷಣ ಇಲಾಖೆಯ ಅಧಿಕಾರಿಯಾದ ಶ್ರೀ ಹನುಮಗೌಡ ಬಿ.ಕೆ., ವಿನಾಯಕ ಗಡ್ಡದ ದೈಹಿಕ ಶಿಕ್ಷಣ ಪರಿವೀಕ್ಷಕರು ನ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಝೇಂಕಾರ ಬಿ. ಹಾಗೂ ಕಬ್ಬೂರು ಕ್ಲಸ್ಟರ್ ವ್ಯಾಪ್ತಿಯ ಎಲ್ಲಾ ಪ್ರಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ಸಹ ಶಿಕ್ಷಕರು ಉಪಸ್ಥಿತರಿದ್ದು ಕ್ರೀಡಾಕೂಟ ಯಶಸ್ವಿಯಾಗಿ ನಡೆಯಲು ಸಹಕರಿಸಿದರು.

ವಿಶೇಷ ಸನ್ಮಾನ:
ಇದೇ ಸಂದರ್ಭದಲ್ಲಿ ಕಬ್ಬೂರು ಕ್ಲಸ್ಟರ್‌ನ ಮಾಜಿ ಸಿ.ಆರ್.ಪಿ (CRP) ಶ್ರೀಮತಿ ಶಿಲ್ಪಾ ಉಜ್ಜಮ್ಮನವರ ಅವರನ್ನು ಇಲಾಖೆ ಹಾಗೂ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಎರಡು ದಿನಗಳ ಕಾಲ ಜರುಗಲಿರುವ ಈ ಕ್ರೀಡಾಕೂಟದಲ್ಲಿ ಕ್ಲಸ್ಟರ್‌ನ ವಿವಿಧ ಶಾಲೆಗಳಿಂದ ನೂರಾರು ವಿದ್ಯಾರ್ಥಿ-ಕ್ರೀಡಾಪಟುಗಳು ಅತ್ಯಂತ ಉತ್ಸಾಹದಿಂದ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ.
ವರದಿ ಸ್ಪರ್ಧಾ ನ್ಯೂಸ್ ನಿಂಗರಾಜ್ ಕಾಸಂಬಿ ಹಾವೇರಿ.





