ಶೀರ್ಷಿಕೆ: “45” ಚಿತ್ರದ ವಿರುದ್ಧ ಅಪಪ್ರಚಾರ ಮಾಡಿದರೆ ಕಾನೂನು ಕ್ರಮ: ಘನ ನ್ಯಾಯಾಲಯದಿಂದ ಮಧ್ಯಂತರ ಆದೇಶ!

ಬೆಂಗಳೂರು: ಶಿವರಾಜ್‌ಕುಮಾರ್ ಅಭಿನಯದ ಬಹುನಿರೀಕ್ಷಿತ “45” ಚಿತ್ರದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಅಪಪ್ರಚಾರಕ್ಕೆ ಸಂಬಂಧಿಸಿದಂತೆ ಚಿತ್ರತಂಡವು ಬೆಂಗಳೂರಿನ 9ನೇ ಅಪರ ಸಿಟಿ ಸಿವಿಲ್ ನ್ಯಾಯಾಲಯದಿಂದ ಮಹತ್ವದ ಮಧ್ಯಂತರ ಆದೇಶವನ್ನು ಪಡೆದುಕೊಂಡಿದೆ.

ನ್ಯಾಯಾಲಯದ ಆದೇಶದ ಮುಖ್ಯಾಂಶಗಳು:

  • ನಿಷೇಧ: ಯಾವುದೇ ವ್ಯಕ್ತಿ, ಸಂಸ್ಥೆ, ಯೂಟ್ಯೂಬ್ ಚಾನೆಲ್ ಅಥವಾ ಸಾಮಾಜಿಕ ಜಾಲತಾಣದ ಖಾತೆದಾರರು ಚಿತ್ರದ ಕುರಿತು ಅವಹೇಳನಕಾರಿ, ಮಾನಹಾನಿಕರ ವಿಮರ್ಶೆ ಅಥವಾ ನೆಗೆಟಿವ್ ರೇಟಿಂಗ್ ನೀಡುವಂತಿಲ್ಲ.
  • ತೆಗೆದುಹಾಕಲು ಸೂಚನೆ: ಈಗಾಗಲೇ ಪ್ರಕಟವಾಗಿರುವ ಇಂತಹ ಎಲ್ಲಾ ವಿವಾದಾತ್ಮಕ ಪೋಸ್ಟ್‌ಗಳನ್ನು ತಕ್ಷಣವೇ ಡಿಲೀಟ್ ಮಾಡುವಂತೆ ನ್ಯಾಯಾಲಯ ನಿರ್ದೇಶಿಸಿದೆ.
  • ಕಠಿಣ ಕ್ರಮ: ನ್ಯಾಯಾಲಯದ ಆದೇಶವಿದ್ದರೂ ಅಪಪ್ರಚಾರ ಮುಂದುವರಿಸುವವರ ವಿರುದ್ಧ ‘ನ್ಯಾಯಾಂಗ ನಿಂದನೆ’ ಮೊಕದ್ದಮೆ ಹೂಡಲಾಗುವುದು.