ಬೆಂಗಳೂರು: ದೆಹಲಿಯ ಕೆಂಪುಕೋಟೆ ಆವರಣದಲ್ಲಿ ನಡೆದ ಕಾರ್ ಬಾಂಬ್ ಸ್ಫೋಟದ ಕುರಿತು ಶಂಕೆ ವ್ಯಕ್ತಪಡಿಸಿರುವ ಕರ್ನಾಟಕದ ಅಲ್ಪ ಸಂಖ್ಯಾತ ಸಚಿವ ಬಿಝಡ್ ಜಮೀರ್ ಅಹ್ಮದ್ ಖಾನ್ ‘ಬಿಹಾರ ಚುನಾವಣೆಯ ಒಂದು ದಿನ ಮೊದಲು ಏಕೆ ಸ್ಫೋಟ ನಡೆಯಿತು’ ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಬುಧವಾರ ಮಾತನಾಡಿದ ಜಮೀರ್, ‘ಇಸ್ಲಾಂ ಧರ್ಮದಲ್ಲಿ ಭಯೋತ್ಪಾದನೆಗೆ ಅವಕಾಶ ಇಲ್ಲ. ಹಾಗಾಗಿ ಭಯೋತ್ಪಾದಕರು ಮುಸ್ಲಿಮರಾಗಲು ಸಾಧ್ಯವಿಲ್ಲ ಎಂದರು.

ಅಂತೆಯೇ ದೆಹಲಿ ಕಾರ್‌ ಸ್ಫೋಟ ಪ್ರಕರಣ ಹಾಗೂ ಉಗ್ರಗಾಮಿ ಚಟುವಟಿಕೆಯ ಆರೋಪದಲ್ಲಿ ಬಂಧಿತರಾಗಿರುವ ವೈದ್ಯರ ನೆಟ್‌ವರ್ಕ್ ಬಗ್ಗೆ ಮಾತನಾಡಿದ ಅವರು, ಬಿಹಾರ ಚುನಾವಣೆಯ ಒಂದು ದಿನ ಮೊದಲು ಏಕೆ ಸ್ಫೋಟ ನಡೆದಿತ್ತು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

‘ಬಿಹಾರ ಚುನಾವಣೆ ಒಂದು ದಿನದ ಮುಂಚೆ ಬ್ಲಾಸ್ಟ್ ಹೇಗಾಯಿತು? ಹಾಗೇನಾದರೂ ಆಗಿದ್ರೆ ಯಾರಿಗೂ ಒಳ್ಳೆಯದಾಗಲ್ಲ. ಯಾರೂ ಇಲ್ಲಿಯೇ ಗೂಟ ಹೊಡೆದುಕೊಂಡು ಇಲ್ಲಿಯೇ ಇರುವುದಿಲ್ಲ. ಸಿಎಂ ಆಗ್ಲಿ ಪ್ರಧಾನಿ ಆಗಲು ಯಾರೂ ಶಾಶ್ವತವಾಗಿ ಇಲ್ಲಿಯೇ ಗೂಟ ಹೊಡೆದು ಇರುವುದಿಲ್ಲ ಎಂದು ಹೇಳಿದರು.