ಹಾನಗಲ್ಲ: ತಾಲೂಕಿನ ಐತಿಹಾಸಿಕ ಪ್ರಸಿದ್ಧ ಸುಕ್ಷೇತ್ರವಾದ ಕಲಕೇರಿ ಗ್ರಾಮದಲ್ಲಿ ಮಾರ್ಚ್ 04 ರಿಂದ ಮಾರ್ಚ್ 12 ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಬಸವಣ್ಣದೇವರ ರಥೋತ್ಸವ ಮತ್ತು ಶ್ರೀ ವೀರಭದ್ರದೇವರ ಗುಗ್ಗಳ ಮಹೋತ್ಸವವು ಅತ್ಯಂತ ವೈಭವದಿಂದ ಜರುಗಲಿದೆ.

ಧಾರ್ಮಿಕ ಸಾನಿಧ್ಯ ಮತ್ತು ನೇತೃತ್ವ:

ಈ ಭವ್ಯ ಸಮಾರಂಭವು ಶ್ರೀ ಷ. ಬ್ರ. ನಂಜುಂಡ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಹಾಗೂ ಶ್ರೀ ವೇ. ಮೂ. ಮೌನೇಶ್ವರಯ್ಯನವರು ಹಿರೇಮಠ ಇವರ ನೇತೃತ್ವದಲ್ಲಿ ಜರುಗಲಿದೆ.

ಪ್ರಮುಖ ಕಾರ್ಯಕ್ರಮಗಳ ವಿವರ:

  • ದಿನಾಂಕ 04-03-2026 (ಬುಧವಾರ): ಸಾಯಂಕಾಲ ಗ್ರಾಮದ ಎಲ್ಲ ದೇವತೆಗಳಿಗೆ ಕಂಕಣಧಾರಣೆ ಮಾಡುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಗುವುದು. ರಾತ್ರಿ 8 ಗಂಟೆಗೆ ಮಹಾದಾಸೋಹ ಜರುಗಲಿದೆ.
  • ಶ್ರೀ ಬಸವ ಪುರಾಣ: ದಿನಾಂಕ 28-02-2026 ರಿಂದ 08-03-2026 ರವರೆಗೆ ಪ್ರತಿ ದಿನ ಸಾಯಂಕಾಲ ಶ್ರೀ ಶಿವಾನಂದ ಬಂಗೇರಿ ಮತ್ತು ಶ್ರೀ ಈಶ್ವರ ಬಡಿಗೇರ ಅವರಿಂದ ಪುರಾಣ ಪ್ರವಚನ ನಡೆಯಲಿದೆ.
  • ದಿನಾಂಕ 06-03-2026 (ಶುಕ್ರವಾರ): ಗ್ರಾಮದ ಸಕಲ ಸದ್ಭಕ್ತರಿಂದ ಲಕ್ಷ್ಮಿ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಲಿದೆ.
  • ದಿನಾಂಕ 08-03-2026 (ರವಿವಾರ): ಬೆಳಿಗ್ಗೆ ಬಸವಣ್ಣದೇವರಿಗೆ ಹಾಗೂ ಜಯಲಿಂಗೇಶ್ವರ ಶಿವಲಿಂಗಕ್ಕೆ ಅಭಿಷೇಕ, ಮಧ್ಯಾಹ್ನ 12-45ಕ್ಕೆ ಅಕ್ಷಯ ಲಗ್ನದ ಶುಭ ಮುಹೂರ್ತದಲ್ಲಿ ಸಾಮೂಹಿಕ ವಿವಾಹ ಮಹೋತ್ಸವಗಳು ಜರುಗಲಿವೆ.
  • ದಿನಾಂಕ 09-03-2026 (ಸೋಮವಾರ): ಬೆಳಿಗ್ಗೆ 8 ಗಂಟೆಗೆ ಪುಷ್ಪ ರಥೋತ್ಸವ ಜರುಗಲಿದೆ.
  • ದಿನಾಂಕ 10-03-2026 (ಮಂಗಳವಾರ): ಬೆಳಿಗ್ಗೆ ಶ್ರೀ ವೀರಭದ್ರದೇವರಿಗೆ ಮಹಾರುದ್ರಾಭಿಷೇಕ ಹಾಗೂ ಸಹಸ್ರ ಬಿಲ್ವಾರ್ಚನೆ ನಡೆಯಲಿದ್ದು, ಮಧ್ಯಾಹ್ನ 1 ಗಂಟೆಗೆ ಅಗ್ನಿಕುಂಡ ಹಾಯುವುದರೊಂದಿಗೆ ಶ್ರೀ ವೀರಭದ್ರದೇವರ ಗುಗ್ಗಳ ಹಾಗೂ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಲಿದೆ.

ವಿಶೇಷ ಆಕರ್ಷಣೆ:

ರಥೋತ್ಸವದ ದಿನ ಸಾಯಂಕಾಲ 8 ಗಂಟೆಗೆ ಕಲಕೇರಿ ಪ್ರಾಥಮಿಕ ಶಾಲಾ ಮಕ್ಕಳಿಂದ ‘ರಸಮಂಜರಿ’ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

​ಕಲಕೇರಿ ಗ್ರಾಮದ ಸಕಲ ಹಿರಿಯರು, ಯುವಕರು ಮತ್ತು ಭಕ್ತ ಮಂಡಳಿಯವರು ಈ ಭಕ್ತಿಪೂರ್ವಕ ಕಾರ್ಯಕ್ರಮಕ್ಕೆ ಸರ್ವರಿಗೂ ಆದರದ ಸ್ವಾಗತವನ್ನು ಕೋರಿದ್ದಾರೆ.

ವರದಿ: ಸ್ಪರ್ಧಾ ನ್ಯೂಸ್ ಭಾರತ್

www.spardhanews.in